ರಚನೆ: ಶ್ರೀ ಪುರಂದರದಾಸರು
ರಾಗ:ಖಮಾಚ್
ತಾಳ:ಖಂಡ ಛಾಪು

ಅಂಬೆಗಾಲಿಕ್ಕುತಲಿ ಬಂದ ಗೋವಿಂದ ||ಪ||
ಅಂಬುಜನಾಭನು ದಯದಿಂದ ಎನ್ನ ಮನೆಗೆ ||ಅ.ಪ||

ಜಲಚರ ಜಲವಾಸ ಧರಣಿಧರ ಮೃಗರೂಪ
ನೆಲನಳೆದು ಮೂರಡಿ ಮಾಡಿ ಬಂದ
ಕುಲನಶ ವನಮಾಸ ನವನೀತ ಚೋರನಿವ 
ಲಲನೆಯರ ವ್ರತಭಂಗ ವಾಹನತುರಂಗ ||೧||

ಕಣ್ಣು  ಬಿಡುವನು ತನ್ನ ಬೆನ್ನ ತಗ್ಗಿಸುವನು
ಮಣ್ಣು ಕೊರೆದು ಕೋರೆ ಬಾಯ ತೆರೆದು
ಚಿಣ್ಣ ಭಾರ್ಗವ ಲಕ್ಶ್ಮಣಣ್ಣ ಬೆಣ್ಣೆಯ ಕಳ್ಳ
ಮನವನ ಬಿಟ್ಟು ಕುದುರೆಯನೇರಿದ ||೨||

ನೀರಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು
ನರಮೃಗ ಬಲಿಬಂದ ಕೊರಳುಗೊಯಿಕ
ಶರಮುರಿದೊರಳೆಳೆದು ನಿರವಾಣಿ ಹಯಹತ್ತಿ
ಪುರಂದರವಿಟಠಲ ಮನೆಗೆ ತಾ ಬಂದ ||೩||
ಕೇಳಿರೀ ಈ ಹಾಡನ್ನು
ಅಂಬೆಗಾಲಿಕ್ಕುತಲಿ ಹಾಡಿದವರು:ನೀರಜ ಅಚ್ಯುತ ರಾವ್,ಎಮ್.ಎ.ಜ್ಯೋತಿ ಮತ್ತು ಡಿ.ಸಹನ

ವರ್ಗ: ಪುರಂದರದಾಸ ಸಾಹಿತ್ಯ